•  
  •  
  •  
  •  
Index   ವಚನ - 726    Search  
 
ನೆನಹು ಮುಕ್ತಾಫಳವಾಗಿ ತರುಣಿ ನಿನ್ನ ಗಳದಲ್ಲಿ ಚಲನೆಯಿಲ್ಲದೆ ದಾಯವಾದವೊ ಅವ್ವಾ. ಆದಿ ಮಧ್ಯಬಿಂದುವಿನೊಳು ಭೇದಿಸಿದ ನಾದ ಕಳೆಯ ದಾಯವ ನೋಡಾ, ದಾಯಂ ಮಣಿಯ ಆಭರಣದಲ್ಲಿ ಆಬೆ ಒಪ್ಪಿದಳಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nenahu muktāphalavāgi taruṇi ninna gaḷadalli calaneyillade dāyavādavo avvā. Ādi madhyabinduvinoḷu bhēdisida nāda kaḷeya dāyava nōḍā, dāyaṁ maṇiya ābharaṇadalli ābe oppidaḷayyā kapilasid'dhamallikārjunā.