•  
  •  
  •  
  •  
Index   ವಚನ - 729    Search  
 
ನೆರೆಮನೆಯ ಕೇರಿಯೊಳಗೆ ಗುರುಕರುಣ ಪಾತ್ರೆಯಲಿ ಹರುಷದಿಂದ ಭಿಕ್ಷವ ತಂದೆ ಅವ್ವಾ, ಕರಣ ಶುದ್ಧಮಾಡಿ ಉಣ್ಣ ಬಾರಾ. ನೆನಹಿನ ಗುಣದಲ್ಲಿ ಕರುಣ ಕಾನನದಲ್ಲಿ ತೆರಹುಗೆಟ್ಟು ಇದ್ದೆನು ಕಂಡಾ. ಕರುಣಾಕರನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನೆನಹಿನಲ್ಲಿ ಲೀಯವಾದೆನು.
Transliteration Neremaneya kēriyoḷage gurukaruṇa pātreyali haruṣadinda bhikṣava tande avvā, karaṇa śud'dhamāḍi uṇṇa bārā. Nenahina guṇadalli karuṇa kānanadalli terahugeṭṭu iddenu kaṇḍā. Karuṇākarane kapilasid'dhamallikārjunanemba nenahinalli līyavādenu.