ಪಾದೋದಕವು ಲಿಂಗದ ಮೇಲೆ ಎರೆದಲ್ಲಿ ಜಂಗಮ ಘನವಾಯಿತ್ತು.
ಆ ಲಿಂಗೋದಕ ಸ್ವೀಕರಿಸಿದಲ್ಲಿ ಜಂಗಮಕ್ಕೆ ಘನವಾಯಿತ್ತು.
ಲಿಂಗದ ಕಳೆಯೆ ಜಂಗಮ, ಜಂಗಮದ ಕಳೆಯೇ ಲಿಂಗ;
ಆವುದ ಘನವೆಂಬೆ; ಆವುದ ಕಿರಿದೆಂಬೆ?
ಲಿಂಗ-ಜಂಗಮ ನೇತ್ರದಲ್ಲಿಯ
ಪ್ರಕಾಶದಂತೆ ತಿಳಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Pādōdakavu liṅgada mēle eredalli jaṅgama ghanavāyittu.
Ā liṅgōdaka svīkarisida jaṅgamakke ghanavāyittu.
Liṅgada kaḷeye jaṅgama, jaṅgamada kaḷeyē liṅga;
āvuda ghanavembe; āvuda kiridembe?
Liṅga-jaṅgama nētradalliya
prakāśadante tiḷide nōḍā,
kapilasid'dhamallikārjunā.