•  
  •  
  •  
  •  
Index   ವಚನ - 762    Search  
 
ಪುತ್ರನ ಪೂಜೆಯು ಜನಕನಿಗೆ ದುಃಖಕರವಲ್ಲ. ಸತಿಯ ವೈಭವವು ಪತಿಗೆ ಪ್ರಾಣಹಾನಿಯಲ್ಲ. ತನ್ನ ಭೃತ್ಯನಿಗಾದ ಜಯಘೋಷ ಅರಸನಿಗೆ ಅಸಂತೋಷವಲ್ಲ. ಇದು ಕಾರಣ, ಶಿಷ್ಯನ ಸಮರದಲ್ಲಿ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಂಗೆ ಕೇಳಲು ಅದು ಯೋಗ್ಯವಲ್ಲ, ಅಲ್ಲಮ ಮಹಾಪ್ರಭುವೆ.
Transliteration Putrana pūjeyu janakanige duḥkhakaravalla. Satiya vaibhavavu patige prāṇahāniyalla. Tanna bhr̥tyanigāda jayaghōṣa arasanige asantōṣavalla. Idu kāraṇa, śiṣyana samaradalli śrīguru kapilasid'dhamallikārjunaṅge kēḷalu adu yōgyavalla, allama mahāprabhuve.