ಪ್ರಸಾದತತ್ವದಲಿ ಪ್ರಾದೇಶಿಕನು ನೀನೆ,
ಸಾದಾಖ್ಯತತ್ವಗಳ ಸಮನಿಸದಿಹ
ನಾದಬಿಂದುಕಳೆಯ ಆದಿಮಧ್ಯಾವಸಾನ
ಮೂದೇವರಿಗೆ ತಾನು ಶಕ್ತವಲ್ಲಾ.
ಅವ್ವೆಯ ಕರದಲ್ಲಿ ಅವ್ಯಯ ತಾನಿಪ್ಪ
ಒಯ್ಯನೆ ನಡೆಯಯ್ಯ ಮಠದೊಳಯಿಂಕೆ.
ಮಠದೊಳಗಣ ಭೇದ ಕುಟಿಲಕ್ಕೆ ಇಂಬಿಲ್ಲ,
ಮಠವ ಶುದ್ಧಿಯ ಮಾಡೆಲೆ ಮರುಳು ತಾಯೆ.
ಅಡಿಗಡಿಗೆ ಸಂಗಮದ ನುಡಿಯ ನೀನಾಡಿ
ಒಡಗೂಡವ್ವಾ ಕಪಿಲಸಿದ್ಧಮಲ್ಲಿಕಾರ್ಜುನನಾ.
Transliteration Prasādatatvadali prādēśikanu nīne,
sādākhyatatvagaḷa samanisadiha
nādabindukaḷeya ādimadhyavasāna
mūḍuvavarige tānu śaktavallā.
Avveya karadalli avyaya tānippa
oyyane naḍeyayya maṭhadoḷayiṅke.
Maṭhadoḷagaṇa bhēda kuṭilakke imbilla,
maṭhava śud'dhiya māḍele maruḷu tāye.
Aḍigaḍige saṅgamada nuḍiya nīnāḍi
oḍagūḍavvā kapilasid'dhamallikārjunā.