ವಚನ - 776     
 
ಪ್ರಸಾದಿಯಾದಾತ ಪ್ರಳಯಕ್ಕೊಳಗಾಗ, ಇಂದ್ರಿಯಗಳ ಹರಿಯಲೀಯ, ಬಂದುದನತಿಗಳೆಯ - ಅದು ಲಿಂಗಮುಖದಿಂ ಬಂದುದಾಗಿ, ಆತನ ಅಂಗ ಸರ್ವಾಂಗಲಿಂಗಾಂಗ; ಆತನ ನಡೆ-ನುಡಿ ಚೈತನ್ಯ ಸಾಕ್ಷಾತ್ ಅಯ್ಯನ ಸದ್ಭಾವ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ನಿತ್ಯಪ್ರಸಾದಿಯ ಪರಿಯಿಂತುಂಟು.