Index   ವಚನ - 787    Search  
 
ಫಲ ಪದವನತಿಗಳೆದು ಹೊಲೆಗಲಸಿ ದಲಗೆಟ್ಟು ಕುಲವನಾಳಿದವರಾರೊ ಅಯ್ಯಾ. ನೀ ಸಲ್ಲದಿನ್ನು ನೆಲೆಗೆಟ್ಟು ಬ್ರಹ್ಮದೊಳಗೆ, ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ. ಅಯ್ಯಾ, ದಲವೆ ಫಲವಾಗಿ ಹೊಲೆಯ ನೆಲೆಯಾದಡೆ ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ.