ವಚನ - 173     
 
ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು, ಗುರುಲಿಂಗಜಂಗಮಕ್ಕೆ ಆರೋಗಣೆಯ ಮಾಡಿ ಮಿಕ್ಕುದು ಪ್ರಸಾದ. ಈ ತೆರೆದ ಘನವಪ್ಪ ಲಿಂಗವನು ಒಂದನುವಿನಲ್ಲಿ ತಂದಿರಿಸಿ, ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ, ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ. ಇಂತೀ ತೆರನ ಬೆಸಗೊಳ್ಳಬಲ್ಲಡೆ, ಎನ್ನ ಬೆಸಗೊಳ್ಳೈ ಗುಹೇಶ್ವರಾ.