ವಚನ - 800     
 
ಬಸವನನು ಹೊಗಳುವವ, ಬಸವನನು ನೆನೆವವರ, ಬಸವನನು ಗುರು ಚರ ಇಷ್ಟವೆನಿಪ ಸದಮಲಜ್ಞಾನಪ್ರಕಾಶ ಸದ್ವರ್ತನರ ಹೊರೆಯೊಳಗೆನ್ನನಿರಿಸಯ್ಯಾ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.