ವಚನ - 801     
 
ಬಸವನೇ ಮಾತೆಯಯ್ಯ, ಬಸವನೇ ತಾತನಯ್ಯ. ಬಸವನೇ ಇಹಪರಕೆ ದಾತ, ನಾಥ. ಬಸವಾಕ್ಷರತ್ರಯದ ಸೋಪಾನವಿಡಿದೀಗ ತ್ರೈಲಿಂಗಕ್ಕೆ ಆನು ಮೂಲವಾದೆ. ಬಸವ ಚೆನ್ನಬಸವ ಪ್ರಭುವಿನ ಕರುಣದಿಂದ ದೆಸೆಯೆರಡುಗೆಟ್ಟೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.