•  
  •  
  •  
  •  
Index   ವಚನ - 814    Search  
 
ಬಂದು ಮೂವತ್ತರೊಳು ಸಂದ ಅಕ್ಷರವಾಱು ಒಂದಕ್ಕೆ ಅಕ್ಷರವು ಆರು. ಆರೂನೆಲ್ಲ ಘಟ್ಟಣಿಗೆ ಮುನ್ನ ಫಲಿತವಾಯಿತು ಮಠವು. ಮಠದಿಂದ ಮೇಲೆ ತಾಣಕಂಬನಿರುಗೆ ಕಂಬದಿಂ ಮೇಲೊಪ್ಪಿ ಇಂಬಪ್ಪ ತುಂಬಿಯ ಶಂಭುವೆಂಬಾ ಕುಸುಮ ವಿಕಾಸವಾಗೆ, ಅಂಬರದ ಮೇಲೀಗ ಬಿಂಬವೆಸೆದುದ ಕಂಡೆ, ಶಂಭುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bandu mūvattaroḷu sanda akṣaravāḷu ondakke akṣaravu āru. Ārūnella ghaṭṭaṇige munna phalitavāyitu maṭhavu. Maṭhadinda mēle tāṇakambaniruge kambadiṁ mēloppi imbappa tumbiya śambhuvemba kusuma vikāsavāgē, ambarada mēlīga bimbaveseduda kaṇḍe, śambhuve kapilasid'dhamallikārjunā.