ವಚನ - 895     
 
ಮುಕ್ತಿಯ ಕೂಟಕ್ಕೆ ಮೂಲಿಗ ನೀನೆ ಬಸವಾ. ಭಕ್ತಿಯ ತನುಸಂಬಂಧಿ ನೀನೆ ಬಸವಾ. ಎನಿತೆನಿತು ಜರಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಎನಿತೆನಿತು ಕಡಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ.