•  
  •  
  •  
  •  
Index   ವಚನ - 902    Search  
 
ಮುಟ್ಟಿ ಮುಟ್ಟುವನಲ್ಲ ಮುಟ್ಟದೆಯು ಮುಟ್ಟುವನು, ಹುಟ್ಟು ಹೊಂದೆಂಬುದನು ಕಳೆದು, ನಿಷ್ಠೆಯಿಂ ಗುರುವಿನ ಬಿಗಿದು ಹಿಡಿಯಲಿಕಾ ಗುರು, ಹುಟ್ಟು ಹೊಂದಿಲ್ಲದೆ ಹೋಗೆಂದ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Muṭṭi muṭṭuvanalla muṭṭadeyu muṭṭuvanu, huṭṭu hondembudanu kaḷedu, niṣṭheyiṁ guruvina bigidu hiḍiyalikā guru, huṭṭu illa hōgenda kapilasid'dhamallikārjunā.