ವಚನ - 901     
 
ಮುಟ್ಟಿ ಪೂಜಿಸುವೆನಯ್ಯಾ, ಮುಟ್ಟಿದ ಬಳಿಕ ಇದು ನಷ್ಟವಾಗಬಹುದೆ? ಈ ಹುಟ್ಟುವ ಹೊಂದುವವರ ಮುಟ್ಟಲೀಯದಾರಯ್ಯ. ಮುಟ್ಟಿದ ಬಳಿಕ ಹುಟ್ಟುವ ಹೊಂದುವ ಕಷ್ಟವ ಮಾಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.