ವಚನ - 925     
 
ಮೂರು ಮುಕ್ತಿಮೂಲಾಧಾರಕೆ ಆರು ಶಕ್ತಿ ಅಂತ್ಯಕ್ಕೆ ಮೇಲೆ ಇದ್ದಳವ್ವೆ ಒಬ್ಬಳು. ಆಳಾಪವ ನಡೆಸಿ ಅವ್ವೆ, ಕ್ರೀಯಂ ನಿಃಕ್ರೀಯಾಗುತ್ತಿದ್ದಳು. ಶೂಲಹಸ್ತನೆಂಬ ಬಾಲಕನ ಜನನಿಯಾದಳು, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅವ್ವೆ.