ವಚನ - 924     
 
ಮೂರಾರರಿಮ್ಮೇಲೆ ಆರೂಢದದು ಸಮಸತೆ, ಆರು ಬಣ್ಣವ ಮೀರಿದದು ಅಚಳ ಸಮತೆ, ತೋರಿಪ್ಪ ತಮಗಳನು ಮೀರಿಪ್ಪುದದು ಸಮತೆ, ಗಾರು ಮಾಡದು ಸಮತೆ. ಜ್ಞಾನಮೂಲದಿಂ ಮೀರಿಪ್ಪುದದು ತತ್ತ್ವ ಮೂರತ್ತಾರರ ಮೇಲೆ ತೋರಿಪ್ಪುದದು ನೀನು ಮೀರಿಪ್ಪ ಸಮತೆ ಸಂಯೋಗ ಕಪಿಲಸಿದ್ಧಮಲ್ಲಿಕಾರ್ಜುನಾ.