ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ,
ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯಲಿ,
ತನುವಿನ ಮಂಟಪದ ಘನ ಮಸ್ತಕದಲ್ಲಿಪ್ಪ
ಹೊಂಗಳಸದಾ ಮೂರು ಮತ್ತೊಂದಾಗಿ
ಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿ
ಮೀರಿನಿಂದಾ ತ್ವಮಸಿ
ಕಪಿಲಸಿದ್ಧಮಲ್ಲಿನಾಥನ
ಸಾರಹೃದಯನ ಭಕ್ತಿ ಫಲವಿಂತುಟು.
Music
Courtesy:
Transliteration
Mūru vr̥kṣavu śud'dha, āru phalavū sid'dha,
ārāru kōṭiyadu prasid'dhada tenegaḍada sīmeyali,
tanuvina maṇṭapada ghana mastakadallippa
hoṅgaḷasada mūru mattondāgi
ārārāhutiyinda ārāru kōṭiyindattalāgi
mīrinindā tvamasi
kapilasid'dhamallināthana
sārahr̥dayana bhakti phalavintuṭu.