•  
  •  
  •  
  •  
Index   ವಚನ - 944    Search  
 
ಯೋಗಮೂರುತಿ ಸಮತೆ, ನಾದಬ್ರಹ್ಮದ ಸಮತೆ, ಆದಿಯಾಧಾರಕ್ಕೆ ಮಾತೆ ಸಮತೆ. ಮೂದೇವರಿಗೆ ಕುಲಗುರು ತಾನು. ಸಮತೆಯನು ಭೇದಿಸಿದ ಸಿದ್ಧ ಸುಮತಿಯ ಸಂಗಮಾ ಆದಿಯಕ್ಷರದಲ್ಲಿ ಆಮೋದ ಬಿಂದುವಿನ ಆನಂದ ಧಾತು ಸಮತೆರೂಪು. ಸುಜ್ಞಾನಭರಿತನು ಕಪಿಲಸಿದ್ಧಮಲ್ಲೇಶ್ವರನ ರೂಪು ಮಾಡಿದ ಗುರು ಸಮತೆ ರೂಪು.
Transliteration Yōgamūruti samate, nādabrahmada samate, ādiyādhārakke māte samate. Mūḍuvavarige kulaguru tānu. Samateyanu bhēdisida sid'dha sumatiya saṅgamā ādiyakṣaradalli āmōda binduvina ānanda dhātu samatērūpu. Sujñānabharitanu kapilasid'dhamallēśvarana rūpu māḍida guru samate rūpu.