ವಚನ - 959     
 
ಲಿಂಗ ಲಿಂಗವೆಂಬ ಸಂದೇಹ ಉಳ್ಳನ್ನಕ್ಕ ಸಂದಳಿಯದೆಂಬರೈ ನಿನ್ನವರೆನ್ನ. ಮನ್ನಣೆಯ ಕರಸ್ಥಲಕ್ಕೆ ಇನ್ನು ನೀ ಬಂದಡೆ ಉನ್ನತೋನ್ನತನಪ್ಪೆ ಸಂದಿಲ್ಲದೆ ನಾ ನಿಮ್ಮ ಸೊಮ್ಮಿನೊಳಗಾನೀಗ ಲೀಯ್ಯವಪ್ಪೆ ಕಪಿಲಸಿದ್ಧಮಲ್ಲಿಕಾರ್ಜುನಾ.