ವಚನ - 960     
 
ಲಿಂಗವ ಪೂಜಿಸಿ ಫಲವೇನಯ್ಯಾ, ಅಂಗನೆಯರೊಲುಮೆಯಾಗದನ್ನಕ್ಕ? ಜಂಗಮವ ಪೂಜಿಸಿ ಫಲವೇನಯ್ಯಾ, ಮೋಕ್ಷಾಂಗನೆ ಮೈಗೂಡದನ್ನಕ್ಕ? ಅಂಗಜ ಬಂದು ಫಲವೇನಯ್ಯಾ, ನಾ ಮನವೊಲಿದು ರತಿಗೊಲಿಯದನ್ನಕ್ಕ? ಶರಣಸತಿ ಲಿಂಗಪತಿ ಎಂಬ ವೀರತ್ವ ಕೆಟ್ಟಿತೆನ್ನಲೆ ಕಪಿಲಸಿದ್ಧಮಲ್ಲಿಕಾರ್ಜುನಾ.