ವಚನ - 971     
 
ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು ಹದುಳ ಪಟ್ಟಣಮಾಡಿ ಒಪ್ಪಿತೋರಿ ಸಮತೆ ಅಧಿಕಾರದಲಿ ಸುಮತಿಯಾದುದು. ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮ[ð]ಯವೈ. ಆನಂದ ಪಾತ್ರೆಯಲಿ ಸಮತೆ ತೈಲವನೆರೆಯೆ ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು, ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಎಯ್ದಿದ ಬೆಳಗು ಸಮತೆಯಾದೆ.