ವಚನ - 970     
 
ವಂಚನೆಯ ಮಾಡಿ[ದೆ] ನಾನಯ್ಯ ನಿನಗಾನು. ನೀ ಬರಹೇಳಿದ ಹಾಂಗೆ ಬಂದೆ. ನೀ ಬರಹೇಳಿದ ಹಾಂಗೆ ಇದ್ದೆ. ನೀ ಮಾಡಹೇಳಿದ ಹಾಂಗೆ ಮಾಡಿದೆ. ನೀ ಗುರುವಾಗಿ ಬಂದು ಪರಮಸೀಮೆ ಇದೆಂದು ತೋರಿದೆ. ನಾನು ಅಲ್ಲಿಯೇ ಇದ್ದೆನು. ಇನ್ನು ನೀನೊಯ್ದುಲ್ಲಿಗೆ ಬಂದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.