ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಠೆಯ ಮಾಡುವ ಪರಿ
ಇನ್ನೆಂತೊ?
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವ ಪರಿ
ಇನ್ನೆಂತೊ?
ನೆನೆಯಬಾರದ ಲಿಂಗಕ್ಕೆ ಅನುಗ್ರಹವ ಮಾಡುವ ಪರಿ ಇನ್ನೆಂತೊ?
ನುಡಿಯಬಾರದ ಲಿಂಗಕ್ಕೆ ಜಪಪೂಜೆಯದೆಂತೊ?
ಇಲ್ಲದ ಲಿಂಗವ ಧರಿಸುವ ಪರಿ ಇನ್ನೆಂತೊ?
ಮಹಾಮಹಿಮ [ಕಪಿಲಸಿದ್ಧ] ಮಲ್ಲಿಕಾರ್ಜುನ,
ಇದರಂತುವ ನೀವೆ ಬಲ್ಲಿರಿ.
Transliteration Varṇavillada liṅgakke rūpu pratiṣṭheya māḍuva pari
innento?
Praḷayavillada liṅgakke prāṇapratiṣṭheya māḍuva pari
innento?
Neneyabārada liṅgakke anugrahava māḍuva pari innento?
Nuḍiyabārada liṅgakke japapūjeyadento?
Illada liṅgava dharisuva pari innento?
Mahāmahima [kapilasid'dha] mallikārjuna,
idarantuva nīve balliri.