•  
  •  
  •  
  •  
Index   ವಚನ - 974    Search  
 
ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ; ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ; ಅರಿವು ಜ್ಞಾನದ ಬಲ, ಅರಿವು ಸಜ್ಜನಸಹವಾಸದ ಬಲ. ಅರಿವು ಬಾಹ್ಯದಲ್ಲಿ ಇಷ್ಟಲಿಂಗ, ಅರಿವು ಅಂತರಂಗದಲ್ಲಿ ಪ್ರಾಣಲಿಂಗ, ಅರಿವು ಭಾವದಲ್ಲಿ ಆತ್ಮಲಿಂಗ. ಇದು ಕಾರಣ, ವಾದಿಸಿದಲ್ಲಿ ಹುರುಳಿಲ್ಲ, ಮಹತ್ವ ಮಾಡುವಲ್ಲಿ ಹುರುಳಿಲ್ಲ. ಲಿಂಗಜ್ಞಾನವೇ ಹುರುಳು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vāda bud'dhiya bala, vāda abhyāsada bala; mahatva sukr̥tada phala, mahatva sid'dhiya bala; arivu jñānada bala, arivu sajjanasahavāsada bala. Arivu bāhyadalli iṣṭaliṅga, arivu antaraṅgadalli prāṇaliṅga, arivu bhāvadalli ātmaliṅga. Idu kāraṇa, vādisidalli huruḷilla, mahatva māḍuvalli huruḷilla. Liṅgajñānavē huruḷu, kapilasid'dhamallikārjunā.