Index   ವಚನ - 997    Search  
 
ಶಿವಪೂಜೆಯನು ಮಾಡುವ ಕಾಲಕ್ಕೆ ಅವಿತಥವಿಲ್ಲದೆ ಬಯಸದೀ ಮನವು, ಇನ್ನೇವೆ ಇನ್ನೇವೆನಯ್ಯಾ. ಕಾಮಕಿಚ್ಛೈಸೂದು ಕ್ರೋಧಕಿಚ್ಛೈಸೂದು ಇನ್ನೇವೆ, ಇನ್ನೇವೆನಯ್ಯಾ. ನಿನ್ನ ಮನದಲು ಇರಲೀಯದು ತನ್ನ ಮಯವ ಮಾಡೂದು. ಈ ಮಾಯದ ಮನಕ್ಕಂಜುವೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.