Index   ವಚನ - 998    Search  
 
ಶಿವನೇ ಶಿವನೇ ಎಂದು ಒರಲುವೆನಯ್ಯಾ. ಭವನೇ ಭವನೇ ಎಂದು ಬಾಯ ಬಿಡುವೆನಯ್ಯಾ. ಎನ್ನ ಬಾಯಿಗೆ ನಿಮ್ಮ ಪ್ರಸಾದವನಿಕ್ಕೆ, ಎನ್ನ ತನು ನಿಮಗಾಯಿತ್ತು, ಕಪಿಲಸಿದ್ಧಮಲ್ಲಿನಾಥಯ್ಯಾ.