ವಚನ - 1016     
 
ಶ್ರೀಗುರುವೆ ಬಸವಯ್ಯ, ಶ್ರೀಚರವೆ ಬಸವಯ್ಯ. ಶ್ರೀಮಹಾ ಇಷ್ಟಲಿಂಗ ಬಸವಣ್ಣನು. ಆರೈದು ಎನ್ನುವನು ಓರಂತೆ ಸಲಹಿದಾ ಕಾರುಣ್ಯಸುರತರುವೆ ಬಸವಲಿಂಗ ಭಾವಿಸಿ ಎನ್ನುವನು ಅಜಾತನ ಮಾಡಿದಾತ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ