•  
  •  
  •  
  •  
Index   ವಚನ - 1027    Search  
 
ಸಂದು ಸವೆಯಿತ್ತು, ಹಂಗು ಹರಿಯಿತ್ತು. ಆಜ್ಞಾದೀಕ್ಷೆ ಪ್ರಬಲವಾಯಿತ್ತು. ಸ್ವಾನುಭಾವದೀಕ್ಷೆ ಸಂಬಂಧಿಸಿತ್ತು. ಬೋಧಾದೀಕ್ಷೆ ಭೇದಿಸಿತ್ತು. ಅಯ್ಯಾ, ನಿಮ್ಮ ಸಾಧಿಸಿತ್ತು ಒಳಗುಮಾಡಿತ್ತು. ಅರಿದೂ ಇನ್ನೊಂದೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sandu saveyittu, haṅgu hariyittu. Ājñādīkṣe prabalavāyittu. Svānubhāvadīkṣe sambandhisittu. Bōdhādīkṣe bhēdisittu. Ayyā, nim'ma sādhisittu oḷagumāḍittu. Aridū innondū illa, kapilasid'dhamallikārjunā.