Index   ವಚನ - 1036    Search  
 
ಸಂಸಾರವೆಂಬ ಘೋರ ಕಾಂತಾರದೊಳಗೆನ್ನನಾಸುರದಿ ಬಿಡದಿರಾ ಬೊಪ್ಪ. ಎನ್ನ ಬೆಂಬಳಿಯೊಳಿರ್ದು ಸಾಕಾ ಬೊಪ್ಪ. ಎನ್ನ ಹೊರೆಯೊಳಿರ್ದು ಸಾಕಾ ಬೊಪ್ಪ. ಈ ಪ್ರಿಯ ನಾಯಿ ತೋಡಿ ತಿನ್ನುತ್ತಿದೆ, ಕಾಮನೆಂಬ ವೈರಿಗೊಪ್ಪಿಸದಿರೆನ್ನ ಬೊಪ್ಪ. ಅವ್ವೆಯ ಮನೋನಾಥಾ, ನಿರಂಜನ ನಿರ್ಮಾಯ ನಿರವಯ, ನಿಶ್ಶೂನ್ಯ ನಿರಾಲಂಬ ನಿರಾಭಾರಿ ನಿರ್ವ್ಯಸನಿ. ಮುಕ್ತಿಸಾಮ್ರಾಜ್ಯಕ್ಕೊಡೆಯ ನೀನೆಯಯ್ಯಾ. ನಿನ್ನನಗಲದಂತೆ ನಿನ್ನ ಶ್ರೀಪಾದದೊಳಿಂಬಿಡಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.