ವಚನ - 1037     
 
ಸಂಸಾರವೆಂಬ ರಾಹುವಿನ ಅಣಲೊಳಗೆ ಇದ್ದೆನಯ್ಯಾ; ಆವಾಗ ನುಂಗೀತೆಂದರಿಯೆ, ಆವಾಗ ಉಗುಳಿತೆಂದರಿಯೆನಯ್ಯಾ. ಅದರ ಬಾಯಿಂದೆನ್ನ ತೆಗೆದು ಕಾಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.