•  
  •  
  •  
  •  
Index   ವಚನ - 1062    Search  
 
ಸರ್ಪನ ಮೇಲೆ ಪೃಥ್ವಿ ರಚಿಸದಂದು, ಸಮುದ್ರಂಗಳೇಳು ಹಾಸದಂದು, ಅಷ್ಟದಿಗುದಂತಿಗಳು ಹುಟ್ಟದಂದು, ಶಂಖು ಶಲಾಕೆಯಿಲ್ಲದಂದು, ಗಂಗೆ ಗೌರೀವಲ್ಲಭರಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐವರೂ ಹುಟ್ಟಿದಂದು, ಈ ಐವರ ತಾಯಿತಂದೆ ಇಲ್ಲದಂದು ನಿಜಗುರು ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯಾ?
Transliteration Sarpana mēle pr̥thvi racisidandu, samudraṅgaḷēḷu hāsadandu, aṣṭadigudantigaḷu huṭṭadandu, śaṅkhu śalākeyilladandu, gaṅge gaurīvallabharilladandu, brahma viṣṇu rudra īśvara sadāśiva ī aivarū huṭṭiddu, ī aivara tāyitande illadandu nijaguru kapilasid'dhamallēśvarā, nim'ma hesarēnayyā?