•  
  •  
  •  
  •  
Index   ವಚನ - 1072    Search  
 
ಸಾಲೋಕ್ಯದಲ್ಲಿಪ್ಪರು ಕೋಟ್ಯನುಕೋಟಿ; ಸಾಮೀಪ್ಯದಲ್ಲಿಪ್ಪರು ಕೋಟ್ಯನುಕೋಟಿ; ಸಾರೂಪ್ಯದಲ್ಲಿಪ್ಪರು ಕೋಟ್ಯನುಕೋಟಿ; ಸಾಯುಜ್ಯದಲ್ಲಿಪ್ಪರು ಕೋಟ್ಯನುಕೋಟಿ; ನಂದಿವಾಹನರನೇಕ, ಗೌರೀರಮಣರನೇಕ; ಇಂತಪ್ಪ ಗಣಂಗಳ ರೋಮದಲ್ಲಿ ಅನೇಕ ಬ್ರಹ್ಮಾಂಡಗಳು. ಇಂತಪ್ಪ ಗಣಂಗಳು- ವೀರಭದ್ರದೇವರ ಜೆಡೆಮುಡಿಕೇಶಂಗಳಲ್ಲಿ ಅನಂತಗಣಂಗಳುದಯ ವಿಸ್ತಾರವು. ಇದೇನು, ನಿಮ್ಮಿರವಿಗೆ ದುರ್ಲಭ ಮಹತ್ವವೆಂಬೆನೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sālōkyadallipparu kōṭyanukōṭi; sāmīpyadallipparu kōṭyanukōṭi; sārūpyadallipparu kōṭyanukōṭi; sāyujyadallipparu kōṭyanukōṭi; nandivāhanaranēka, gaurīramaṇaranēka; intappa gaṇaṅgaḷa rōmadalli anēka brahmāṇḍagaḷu. Intappa gaṇagaḷu- vīrabhadradēvara jaḍemuḍikēśaṅgaḷalli anantagaṇaṅgaḷudaya vistāravu. Idenu, nim'miravige durlabha mahatvavembene? Kapilasid'dhamallikārjunā.