ವಚನ - 1074     
 
ಸೀಮೆಗೆಟ್ಟ ಸಂಬಂಧಸ್ಥಾನದಲ್ಲಿ ಆನು ನೀನಾದ ಪರಿ ತಾನೆಂತುಟೊ? ಇಷ್ಟಲಿಂಗದ ಪೂಜೆ ಮತ್ತೆ ಭವದಾಗರಕೆ ತಂದಿಳುಹಿತ್ತು ನೋಡು ನೋಡಾ. ಮತ್ತೆ ಚರಲಿಂಗ ಪೂಜೆಯ ಮಾಡಲಿಕ್ಕಾನು ಮುತ್ತೆರಡು ಆದೆ, ಕಪಿಲಸಿದ್ಧಮಲ್ಲಿಕಾರ್ಜುನಾ.