ಸೀಮೆಯುಳ್ಳನ್ನಬರ ತಾನು ತನ್ನಂಗವಾಗಿರಬೇಕು,
ಅನ್ಯಂಗವಾಗದೆ.
ಅನ್ಯಂಗ ಅನ್ಯಂಗವೆ?
ಗುರುಕರುಣದಿಂದ ತನ್ನಂಗ ಅನ್ಯಂಗವಾದಡೆ
ಸೀಮೆಯ ಸಂಬಂಧಿ ತಾನಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಅಚ್ಚ ಶರಣನು.
Transliteration Sīmeyuḷḷannabara tānu tannaṅga khacita,
an'yaṅgavāgade.
An'yaṅga an'yaṅgave?
Gurukaruṇadinda tannaṅga an'yaṅgavādaḍe
sīmeya sambandhi tānalla,
kapilasid'dhamallikārjunayyanalli acca śaraṇanu.