ಸೋಂಕಿನ ಸುಖ ಮೊದಲಾದವನೆಲ್ಲವನು
ಚರಲಿಂಗಕ್ಕರ್ಪಿಸುವೆ.
ಆ ಅರ್ಪಿತಮುಖದಲ್ಲಿ ಇಷ್ಟಲಿಂಗವನರಿಯದೆ
ಚರಲಿಂಗಕ್ಕರ್ಪಿಸುವೆ.
ಆ ಚರಲಿಂಗಕ್ಕರ್ಪಿಸಿ ಮಿಕ್ಕ ಶೇಷವನು
ಇಷ್ಟಲಿಂಗಕ್ಕೆ ಓಗರವಾಗಿ ನೀಡಿ,
ಪ್ರಸಾದವಾಗಿ ಕೈಕೊಂಬೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sōṅkina sukha modalādavanellavanu
caraliṅgakkarpisuve.
Ā arpitamukhadalli iṣṭaliṅgavanariyade
caraliṅgakkarpisuve.
Ā caraliṅgakarpisi mikka śēṣavanu
iṣṭaliṅgakke ōgaravāgi nīḍi,
prasādavāgi kaikombe,
kapilasid'dhamallikārjunā.