ಸ್ಥಳವೊಂದರಲ್ಲಿ ಕೂಪಂಗಳು ಹಲವಾಗಿ ಭವಿಸುತ್ತೈದಾವೆ.
ಮೊದಲಲ್ಲಿ ಮೂರು, ಅಂತರದಲ್ಲಿ ಆರು,
ಪರಸ್ಥಾನದಲ್ಲಿ ಒಂಬತ್ತು.
ವೈನೈಯೆಂಬ ಅಕ್ಷರದ ಮೊದಲ ಬಹುಶ್ರುತವಪ್ಪ ಕಮಲ
ವಿಚಿತ್ರಾಂದೋಳನೆಂಬ ಭ್ರಮರ
ಪರಿಮಳವ ಸೂಸಿ ಬೀಸರವೋಗಲೀಯದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ
ಸರ್ವಸ್ವವನರ್ಪಿಸಿ ಸುಖಿಯಾಯಿತು.
Music
Courtesy:
Transliteration
Sthaḷada kūpaṅgaḷu halavāgi bhavisuttaidāve.
Modalu mūru, antaradalli āru,
parasthānadalli ombattu.
Vainaiyemba akṣarada modala bahuśrutavappa kamala
vicitrāndōḷanemba bhramara
parimaḷava sūsi bīsaravogalīyade
kapilasid'dhamallikārjunayyage
sarvasvavanarpisi sukhiyāyitu.