ಸ್ಥೂಲ ಸೂಕ್ಷ್ಮ ಕಾರಣವೆಂಬ ತನುಗಳ ಭೇದಂಗಳ
ಭೇದಿಸುವ ಪರಿಯನರಿದೆನಯ್ಯಾ ನಿಮ್ಮಲ್ಲಿ.
ನೀ ಕಾರಣತನುವಾಗಿಪ್ಪಲ್ಲಿ ಅರಿದೆ.
ಮಹಾಕಾರಣವ ಅರಿದು ಅನಾಮಯನಾದೆ.
ಸ್ಥೂಲದಲ್ಲಿ ಶುದ್ಧನಾದೆ, ಸೂಕ್ಷ್ಮದಲಿ ಸಿದ್ಧನಾದೆ,
ಕಾರಣದಲಿ
ಪ್ರಸಿದ್ಧನಾದೆ.
ನಿಮ್ಮ ಕರುಣಕಾನನದಲಿ ಕಂಗೆಟ್ಟೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sthūla sūkṣma kāraṇavemba tanugaḷa bhēdaṅgaḷa
bhēdisuva pariyanaridenayyā nim'malli.
Nī kāraṇatanuvāgippalli aride.
Mahākāraṇava aridu anāmayanāde.
Sthūladalli śud'dhanāde, sūkṣmadali sid'dhanāde,
kāraṇadali
prasid'dhanāde.
Nim'ma karuṇakānanadali kaṅgeṭṭe,
kapilasid'dhamallikārjunā.