•  
  •  
  •  
  •  
Index   ವಚನ - 1127    Search  
 
ಹಾಡs, ಎಂದಡೆ ಇಂದೆಂತುಟಾದಡಾಗಲಿ ನೀ ಕೇಳುವಂತೆ ಹಾಡಿದೆನು ಕಂಡಯ್ಯ. ಎಲೆ ಅಯ್ಯಾ, ಅಯ್ಯಾ, ಮಾ! ನಿಮ್ಮ ಹಾಡುವ ಹಾಡ ಚಿತ್ತೈಸುವುದಯ್ಯಾ. ನಿಮ್ಮ ಧ್ಯಾನಗಳನವಧರಿಸು, ಕೇಳು ಕೇಳಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರ ದೇವರ ದೇವಯ್ಯ.
Transliteration Hāḍas, endaḍe indentuṭādadāgali nī kēḷuvante hāḍidenu kaṇḍayya. Ele ayya, ayyā, mā! Nim'ma hāḍuva hāḍa cittaisuvudayya. Nim'ma dhyānagaḷanavadharisu, kēḷu kēḷayya, enna kapilasid'dhamallēśvara dēvara dēvayya.