ವಚನ - 1134     
 
ಹಿಂದೆ ಬಂದುದನರಿದುದಿಲ್ಲಾಗಿ ಮುಂದೆ ಬಹುದಕ್ಕೆ ಚಿಂತಿಸಲೇಕೆ? ಇಂದಿಂಗೆಂಬುದು ಲಿಂಗದೊಲವು ಶಿವಭಕ್ತಂಗೆ; ನಾಳಿಂಗೆಂಬುದು ಬದ್ಧಭವಿತನ. ಎನ್ನಾದಿಗುರು ಕಪಿಲಸಿದ್ಧಮಲ್ಲಿಕಾರ್ಜುನದೇವಾ, ನೀವಂದಂದಿಗೆ ಕೊಟ್ಟ ಪಡಿ ತಪ್ಪದಯ್ಯಾ ಮತ್ತಾರನೂ ಬಳಿವಿಡಿಯಲಿಲ್ಲವಯ್ಯಾ, ಎನ್ನ ತಂದೆ.