ಹುಟ್ಟಿದ ಬೆಟ್ಟಂಗಳು ಬಟ್ಟಬರಿಯ ಲಿಂಗವಾದವಲ್ಲಾ.
ನಿಜವರಿತವರೆನ್ನವರು,
ಕುಬುದ್ಧಿಯೆಲ್ಲವ ಕೊಂಡು ಮುಳುಗಿತ್ತು ನೋಡಾ.
ಕುಬುದ್ಧಿಯನರಿಯದ ನರದ್ರೋಹಿಗಳಿಗೆಲ್ಲಾ ಹಬ್ಬ ಬಂದಿತ್ತಲ್ಲಾ.
ನರರೆಂಬ ಕೊಬ್ಬಿದ ಕುರಿಗಳಿಗೆಲ್ಲಾ ಹಬ್ಬ ಬಂದಿತ್ತಲ್ಲಾ.
ನಿಸ್ಸೀಮ ನಿಜಗುಣ ಕಪಿಲಸಿದ್ಧಮಲ್ಲಿನಾಥಾ
ನರರೆಂಬ ಪ್ರಾಣಿಗಳಿಗೆ ಹಬ್ಬ ಬಂದಿತ್ತಲ್ಲಾ.
Transliteration Huṭṭida beṭṭagaḷu baṭṭabariya liṅgavādavallā.
Nijavaritavarēnnavaru,
kubud'dhiyellava koṇḍu muḷugittu nōḍā.
Kubud'dhiyanariyada naradrōhigaḷigellā habba bandittallā.
Nararemba kabbida kurigaḷigellā habba bandittallā.
Nis'sīma nijaguṇa kapilasid'dhamallināthā
nararemba prāṇigaḷige habba bandittallā.