ವಚನ - 1143     
 
ಹೂವರಳೆಯ ಹಾಸಿನ ಮೇಲಿಪ್ಪನು. ಗಳಗಳನೆ ಹೋಹನು, ಆತುರವೇರಿ ನಿಂದನು ಆತ. ಅತ್ತಲೂ ಹೋಗಲರಿಯದೆ ಇತ್ತಲೂ ಬರಲರಿಯದೆ ಅಲ್ಲಿಯೆ ನಿಂದಾತನ ಬರವ ಹಾರುತ್ತಿರ್ದೆನವ್ವಾ! ಅದೆಂತೆಂದಡೆ: ಎನ್ನ ಮನಕ್ಕೆ ಬಂದು, ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಕೂಡಿದನೆನ್ನ ಕಪಿಲಸಿದ್ಧಮಲ್ಲಿನಾಥಯ್ಯನವ್ವಾ.