•  
  •  
  •  
  •  
Index   ವಚನ - 1156    Search  
 
ಹೊದ್ದಿಯೂ ಹೊದ್ದದಂತಿಪ್ಪವನ ಹೊದ್ದಿ ಸಂಯೋಗವ ಮಾಡುವ ಪರಿಯೆಂತಯ್ಯಾ? ಇಬ್ಬಟ್ಟೆಯಾಗಿಪ್ಪ ನೀಲಕಂಧರ! ಮಸ್ತಕದಲ್ಲಿ ಲೀಲೆಯಿಂದಿಪ್ಪವನ ಸಂಯೋಗವ ಮಾಡುವ ಪರಿಯೆಂತಯ್ಯಾ? ಎಲೆ ಗುರುವೆ, ನೀನು ಸರ್ವಾಂಗವ ಪ್ರವೇಶಿಸುವಲ್ಲಿ, ಎನ್ನೊಡನೆ ಪ್ರವೇಶಿಸಿದ ಕಾರಣ, ಆನು ಸಂಯೋಗವ ಮಾಡಿದೆನೆಲೆ ಎಂದಡೆ, ಮಿಕ್ಕಿನವರಿಗೆ ಸಮನಿಸುವುದೆ ಅಯ್ಯಾ, ಬಡವರಿಗೆ, ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನಿನ್ನ ಕರುಣವುಳ್ಳವರಿಗಲ್ಲದೆ?
Transliteration Hoddiyū hoddadantippavana hoddi sanyōgava māḍuva pariyentayyā? Ibbaṭṭeyāgippa nīlakaṇṭhara! Mastakadalli līleyindippavana sanyōgava māḍuva pariyentayyā? Ele guruve, nīnu sarvāṅgava pravēśisuvalli, ennoḍane pravēśisida kāraṇa, ānu sanyōgava māḍidenele endaḍe, mikkinavarige samanisuttade ayyā, baḍavarige, anaṅgavidāraṇa kapilasid'dhamallikārjunaliṅga ninna karuṇavuḷḷavarigallade?