Index   ವಚನ - 1165    Search  
 
ಲಿಂಗವ ಪೂಜಿಸಿದವರು ಹಲವರುಂಟು, ಅಂಗವ ಪೂಜಿಸಿದವರು ಒಬ್ಬರೂ ಇಲ್ಲ; ಕಾಮವ ತೊರೆದವರು ಹಲವರುಂಟು, ನಿಃಕಾಮವನಳಿದವರು ಒಬ್ಬರೂ ಇಲ್ಲ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.