ಬರಿಯ ನಚ್ಚಿನ ಮಚ್ಚಿನ ಭಕ್ತರು,
ಲಿಂಗವ ಮುಟ್ಟಿಯೂ ಮುಟ್ಟದ ಒಳಲೊಟ್ಟಿಗಳು,
ನೆರೆದು ಗಳಹುತ್ತಿಪ್ಪರು,
ತಮ ತಮಗೆ ಅನುಭಾವವ ನುಡಿವರು.
ಅನುಭಾವದ ಆಯತವನರಿಯದಿರ್ದರೆ
ಹಿಂದಣ ಅನುಭಾವಿಗಳು?
ಗುಹೇಶ್ವರಲಿಂಗದ ಸುಖವನು ಮುಟ್ಟಿದರೆ,
ಮರಳಿ ಭವಕಲ್ಪಿತವೆಲ್ಲಿಯದೊ?
Transliteration Bariya naccina maccina bhaktaru,
liṅgava muṭṭiyū muṭṭada oḷaloṭṭigaḷu,
neredu gaḷahuttipparu,
tama tamage anubhāvava nuḍivaru.
Anubhāvada āyatavanariyadirdare
hindaṇa anubhāvigaḷu?
Guhēśvaraliṅgada sukhavanu muṭṭidare,
maraḷi bhavakalpitavelliyado?
Hindi Translation सिर्फ डांभिक भक्ति का भक्त
लिंग को स्पर्श करन स्पर्श करनेवाले खाली पेटवाले
मिलकर व्यर्थ बातें करते, अपने अपने अनुभाव बताऐंगे।
क्या अनुभाव की सीमा न जानते थे पुराने अनुभावी ?
गुहेश्वरा लिंग सुख पाये हुए को
फिर भव बंधन कहाँ है?
Translated by: Eswara Sharma M and Govindarao B N
Tamil Translation பகட்டு பக்தியுடைய பக்தர்கள்
இலிங்கத்தைத் தரித்தும் பயனடையாத சாரமற்றோர்,
ஓரிடத்தில் ஒன்றுகூடி தமக்குள்ளே
தாம்பெற்ற அனுபவம் குறித்துப் பேசுவர்.
முன்பு வாழ்ந்த ஞானியர் சிவானுபவம்
குறித்து அறியாது இருந்தனரோ?
குஹேசுவர இலிங்கத்துடன் இணையின்
மீண்டும் பிறவி ஏற்படுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುಭಾವ = ಸತ್ಯವಸ್ತುವಿನ ಅಪರೋಕ್ಷ ಜ್ಞಾನ, ನಿಶ್ಚಲವಾದ ನಿರ್ಮಲ ಮನಸ್ಸಿನಲ್ಲಿ ಉಂಟಾಗುವ
ಲಿಂಗದ ಪರಿಭಾವ; ಅರಿಯದಿದ್ದರೆ = ಅರಿತಿರಲಿಲ್ಲವೆ? ಅನುಭವಿಸಿರಲಿಲ್ಲವೆ?; ಆಯತ = ವ್ಯಾಪ್ತಿ, ನೆಲೆ-ಕಲೆ, ಅಂತರಂಗ-ಬಹಿರಂಗ; ಒಳಲೊಟ್ಟೆ = ಟೊಳ್ಳು; ನಚ್ಚುಮಚ್ಚು = ಆಸಕ್ತಿ;
Written by: Sri Siddeswara Swamiji, Vijayapura