•  
  •  
  •  
  •  
Index   ವಚನ - 176    Search  
 
ಮರ್ತ್ಯಲೋಕದ ಮಾನವರು; ದೇಗುಲದೊಳಗೊಂದು ದೇವರ ಮಾಡಿದಡೆ, ಆನು ಬೆರಗಾದೆನು. ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ, ಭೋಗವ ಮಾಡುವರ ಕಂಡು ನಾನು ಬೆರಗಾದೆನು. ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.
Transliteration Martyalōkada mānavaru; dēguladoḷagondu dēvara māḍidaḍe, ānu beragādenu. Niccakke nicca arcane pūjeya māḍisi, bhōgava māḍuvara kaṇḍu nānu beragādenu. Guhēśvarā nim'ma śaraṇaru, hinde liṅgavanirisi hōdaru.
Hindi Translation मर्त्य लोक के मानव मंदिर में एक देव प्रतिमा बनाये तो मैं चकित हुआ। रोज रोज अर्चना पूजा कराते भोग चढ़ानेवालों को देख मैं विस्मित हुआ। गुहेश्वरा, तुम्हारे शरण पीछे लिंग रखकर चले गये। Translated by: Eswara Sharma M and Govindarao B N
Tamil Translation உலகத்திலுள்ள மனிதர்கள் கோயிலிலே ஒரு கடவுளை நிலைநிறுத்தியதைக் கண்டு நான் வியப்பெய்தினேன் ஐயனே. நாள்தோறும் அர்ச்சனை, பூஜையைச் செய்து படையலைப் படைப்பதைக் கண்டு வியப்பெய்தினேன். குஹேசுவரனே, உம் அடியார் முன்னரே இலிங்கத்தை நிலை நிறுத்திச் சென்றனரன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರ್ಚನೆ = ಒಂದೇ ದ್ರವ್ಯವನ್ನು ನಿರ್ದಿಷ್ಟವಾಗಿ ಅರ್ಪಿಸಿ ಪೂಜಿಸುವುದು; ಪೂಜನೆ = ಎಲ್ಲವು ಸೇರಿ ಸಾಂಗವಾಗಿ ಅರ್ಪಣೆಗೈದು ಪೂಜಿಸುವುದು; ಮರ್ತ್ಯಲೋಕ = ನಶ್ವರವಾದ ಭೂಲೋಕ; Written by: Sri Siddeswara Swamiji, Vijayapura