•  
  •  
  •  
  •  
Index   ವಚನ - 1193    Search  
 
ಕಲ್ಪಿತೋದಕ ಒಂದು , ಅರ್ಪಣೋದಕ ಮೂರು, ಮತ್ತೆ ಅಂಗೋದಕವು ತ್ರಯವಾಗಿಯು, ಮಿಕ್ಕ ಪ್ರಸಾದೋದಕ ಅವು ಮೂರು, ಸತ್ವರಜತಮವತಿಗಳೆದವರಿಗಲ್ಲದೆ, ಹತ್ತು ಪಾದೋದಕವನರಿಯಲರಿದು ತಾನು ಚಿತ್ತಶುದ್ಧನಾಗಿ ಗುರುಕರುಣದಿಂದವೆ ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಮತ್ತೆ ಸಂದಿಲ್ಲದಿಹೆ ಅವರು ನೀನು. ಮುತ್ತು ನೀರನು ಕೂಡಿದಾನಂದ ಭೇದದೊಲು ತತ್ತ್ವಮಸಿಯಪ್ಪನೈ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kalpitōdaka ondu, arpaṇōdaka mūru, matte aṅgōdakavu trayavāgiyu, mikka prasādadaka avu mūru, satvarajatamāvatigaḷedavarigallade, hattu pādōdakavanariyalaridu tānu cittaśud'dhanāgi gurukaruṇadindave hattu pādōdakava grahisuva bhaktarige matte sandilladihe avaru nīnu. Muttu nīranu kūḍidānanda bhēdadolu tattvamasiyappanai śrīguru kapilasid'dhamallikārjunā.