ಮುಖದಿಂದ ಹುಟ್ಟಿಪ್ಪ ಮೂರರ್ಪಿತೋದಕದ ಒಳಗೆ,
ಹುಟ್ಟಿತ್ತು ಶುದ್ಧ ಪ್ರಸಾದೋದಕ.
ಸದಮಲ ಜ್ಞಾನದಂಘ್ರಿಯಲ್ಲಿ ಹುಟ್ಟಿತ್ತೊಂದುದಕ.
ಅದನು ಒಯ್ದೆರೆದಲ್ಲಿ ಉದ್ಭವಿಸಿತ್ತು ತಾ
ಕರಣೇಂದ್ರಿಯವನತಿಗಳೆದು ಹತ್ತನೆಯ ಪಾದೋದಕ
ಕ್ರಮವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mukhadinda huṭṭippa mūrarpitōdakada oḷage,
huṭṭittu śud'dha prasādōdaka.
Sadamala jñānadaṅghriyalli huṭṭittondudaka.
Adanu oydereyalli udbhavisittu tā
karaṇēndriyavanatigaḷedu hattaneya pādōdaka
kramavintuṭayyā, kapilasid'dhamallikārjunā.