ಲಿಂಗವಾದ ಬಳಿಕ ಪೂಜಿಸಲಿಲ್ಲ;
ಜಂಗಮವಾದ ಬಳಿಕ ನೋಡಲಿಲ್ಲ;
ಪ್ರಸಾದಿಯಾದ ಬಳಿಕ ರುಚಿಸಲಿಲ್ಲ;
ಇಂತೀ ತ್ರಿವಿಧ ಒಂದಾದ ಬಳಿಕ,
ಕಪಿಲಸಿದ್ದಮಲ್ಲಯ್ಯಾ, ಬೇರೊಂದು ತಿಳಿಯಲಿಲ್ಲ.
Transliteration Liṅgavāda baḷika pūjisalilla;
jaṅgamavāda baḷika nōḍalilla;
prasādiyāda baḷika rucisalilla;
intī trividha ondāda baḷika,
kapilasiddamallayya, bērondu tiḷiyalilla.