ಭಾವಲಿಂಗದಿಂದ ಇಷ್ಟಲಿಂಗವ ಧ್ಯಾನಿಸಹೋದಡೆ,
ಇಷ್ಟಲಿಂಗವೆ ಭಾವಲಿಂಗವಾಯಿತ್ತು.
ಭಾವಲಿಂಗದಿಂದ ತ್ರಿವಿಧವನರಿದೆಹೆನೆಂದಡೆ,
ಭಾವಲಿಂಗವನೆ ಮಹಾಲಿಂಗವಾಗಿ ಅಳವಡಿಸಿದನು,
ಎನ್ನ ಗುರು ಚೆನ್ನಬಸವಣ್ಣನು ಕಾಣಾ, ಕಪಿಲಸಿದ್ಧಮಲ್ಲೇಶಾ.
Transliteration Bhāvaliṅgadinda iṣṭaliṅgava dhyānisahōdaḍe,
iṣṭaliṅgave bhāvaliṅgavāyittu.
Bhāvaliṅgadinda trividhavanaridehenendaḍe,
bhāvaliṅgavane mahāliṅgavāgi aḷavaḍisidanu,
enna guru cennabasavaṇṇanu kāṇā, kapilasid'dhamallēśā.