•  
  •  
  •  
  •  
Index   ವಚನ - 1206    Search  
 
ಶಬ್ದ ನೋಡುವಡೆ ನಪುಂಸಕ; ಅದರ ಕಾರ್ಯ ನೋಡುವಡೆ, ಹರಿಹರ ಬ್ರಹ್ಮಾದಿಗಳನ್ನೆಲ್ಲ ಮುರಿದಿಕ್ಕಿತ್ತು. ಅದರಂತೆ ಹೋದಡೆ ತನ್ನನ್ನು ಬಿಡದು. ತಾ ತಿಳಿದು ಹೋದಡೆ ತನ್ನ ಕಡೆ ಬರದು ನೋಡಾ, ಕಪಿಲಸಿದ್ಧಮಲ್ಲಯ್ಯಾ.
Transliteration Śabda nōḍuvaḍe napunsaka; adara kārya nōḍuvaḍe, harihara brahmādigaḷannella muridikkittu. Adarante hōdaḍe tannannu biḍadu. Tā tiḷidu hōdaḍe tanna kaḍe baradu nōḍā, kapilasid'dhamallayya.